Thursday, October 22, 2020

ವಿಫಲ ಪ್ರಯತ್ನ ದ ನಿಯಮ 🌘🌄🌈

ನಿಮಗೆ ಗೊತ್ತೇ?

🌘🌄🌈

ಸಿಂಹಗಳು ಆಕ್ರಮಣ ಮಾಡಿದಾಗ ಕೇವಲ 25% ಪ್ರಯತ್ನಗಳು ಮಾತ್ರ ಯಶಸ್ಸು ಕಾಣುತ್ತವೆ. ಅಂದರೆ 75% ಪ್ರಯತ್ನಗಳಲ್ಲಿ ಅವು ಸೋಲು ಕಾಣುತ್ತವೆ ಎಂದಾಯಿತು. ಯಶಸ್ಸಿನ ಪ್ರತಿಶತ ಅಷ್ಟು ಕಡಿಮೆ ಇದ್ದರೂ ಅವು ತಮ್ಮ ಪ್ರಯತ್ನವನ್ನು ಮಾತ್ರ ಬಿಡುವುದಿಲ್ಲ.ಅವುಗಳ ಈ ಎಡಬಿಡದ ಪ್ರಯತ್ನ ಹಸಿವಿನ ಕಾರಣಕ್ಕಾಗಿ ಅಲ್ಲ. ಈ wasted efforts ಅಂದರೆ "ವಿಫಲ ಪ್ರಯತ್ನ ದ ನಿಯಮ" ವನ್ನು ಪ್ರಕೃತಿ ಯು ಸಹಜವಾಗಿ ಪ್ರಾಣಿಗಳಲ್ಲಿ ರೂಪಿಸಿ ಬಿಟ್ಟಿದೆ.



ಮೀನಿನ ಅರ್ಧದಷ್ಟು ಮೊಟ್ಟೆಗಳು ತಿನ್ನಲ್ಪಡುತ್ತವೆ. ಉಳಿದರ್ಧ ಮಾತ್ರ ಮೀನುಗಳಾಗಿ ಪರಿವರ್ತನೆ ಹೊಂದುತ್ತವೆ. ಅರ್ಧದಷ್ಟು ಕರಡಿಯ ಮರಿಗಳು ಪ್ರಾಯಕ್ಕೆ ಬರುವ ಮೊದಲೇ ಸಾಯುತ್ತವೆ. ಬೀಳುವ ಮಳೆಯ ಹೆಚ್ಚಿನ ಹನಿಗಳು ಸಮುದ್ರದಲ್ಲಿ ಬೀಳುತ್ತವೆ. ಮರಗಳ ಹೆಚ್ಚಿನ ಬೀಜಗಳನ್ನು ಹಕ್ಕಿಗಳೇ ತಿನ್ನುತ್ತವೆ.ವಿಜ್ಞಾನಿಗಳು ಕಂಡುಕೊಂಡ ಸತ್ಯಾಂಶವೆಂದರೆ, ಪ್ರಾಣಿಗಳು, ಮರ-ಗಿಡಗಳು, ಹಾಗೂ ಪ್ರಕೃತಿಯ ಇತರ ಜೀವಿಗಳು ಈ " ವಿಫಲ ಪ್ರಯತ್ನದ ನಿಯಮ" ವನ್ನು ಒಪ್ಪಿಕೊಂಡು, ಹೊಂದಿಕೊಂಡು ಬಿಟ್ಟಿವೆ.
ಕೇವಲ ಮನುಷ್ಯ ಮಾತ್ರ ಕೆಲವು ಪ್ರಯತ್ನಗಳಲ್ಲಿ ಯಶಸ್ಸು ಸಿಗದಿದ್ದಾಗ ಅದನ್ನು ಸೋಲು ಎಂದು ತಿಳಿದು ಬಿಡುತ್ತಾನೆ. ನಿಜ ಏನೆಂದರೆ, ನಾವು " ಪ್ರಯತ್ನವನ್ನು ನಿಲ್ಲಿಸುವುದು " ನಿಜವಾದ ಸೋಲು.
ಯಶಸ್ವೀ ಬದುಕೆಂದರೆ, ಬೀಳುಗಳಿಲ್ಲದ, ಏರಿಳಿತಗಳಿಲ್ಲದ, ಅಪಾಯಗಳಿಲ್ಲದ ಬದುಕನ್ನು ಬದುಕುವುದಲ್ಲ. ಯಶಸ್ಸೆಂದರೆ, ಪ್ರತಿ ಘಟ್ಟದಲ್ಲಿಯೂ ನಮ್ಮ ತಪ್ಪು ಹೆಜ್ಜೆಗಳನ್ನು ಸರಿಪಡಿಸಿಕೊಳ್ಳುತ್ತ, ಸೋಲುಗಳನ್ನು ಎದುರಿಸುತ್ತ, ಪ್ರಯತ್ನಗಳ ವೈಫಲ್ಯಗಳನ್ನು ಮೆಟ್ಟಿ ನಿಲ್ಲುತ್ತ, ಮುನ್ನಡೆಯುವುದು.
ಈ ಪ್ರಪಂಚದ ನಡೆಗಳನ್ನು ಒಟ್ಟಾರೆಯಾಗಿ ಹೇಳಬೇಕೆಂದರೆ, ಸರಳವಾಗಿ ಹೇಳಬೇಕೆಂದರೆ, "ಮತ್ತೆ ಪ್ರಾರಂಭಿಸು ಮತ್ತು ಮುಂದುವರೆ."

No comments:

Post a Comment

ಬ್ಯಾರಿ ಸೆಂಟರ್...! ಎಂದರೇನು?

  ಬ್ಯಾರಿಸೆಂಟರ್ (Barycenter) ಬ್ಯಾರಿಸೆಂಟರ್ (Barycenter) ಪರಿಕಲ್ಪನೆಯನ್ನು ಈ ಕೆಳಗಿನ ಚಿತ್ರದ ಮೂಲಕ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು. ಈ ಚಿತ್ರವು ಬ್ಯಾರಿಸೆಂ...