Tuesday, January 12, 2021

ಸ್ವಾಮಿ ವಿವೇಕಾನಂದರ ಕುರಿತು ಮುದ್ದು ಪುಟಾಣಿ ನುಡಿಗಳು


 

🌹🌹 *ವೀರ ಕೇಸರಿಯ ,.ಸಿಡಿಲ ನುಡಿಗಳು* (ಚಿಕಾಗೋ ಭಾಷಣ) *ಜಗತ್ತಿನ ಅತ್ಯಂತ ಪುರಾತನ ಸಂತರ ಸಮುದಾಯದ ಪರವಾಗಿ, ಎಲ್ಲ ಧರ್ಮಗಳ ಮಾತೆಯ ಪರವಾಗಿ ನಾನು ನಿಮಗೆ ಧನ್ಯವಾದ ಹೇಳುತ್ತೇನೆ ; ಅನೇಕ ವರ್ಗಗಳಲ್ಲಿ ಹಂಚಿಹೋಗಿರುವ ಲಕ್ಷಾಂತರ ಹಿಂದೂ ಜನತೆಯ ಪರವಾಗಿ ನಾನು ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ.* 👏🏻👏🏻👏🏻👏🏻👏🏻👏🏻 _------------------_----------- *ಕೇವಲ ಸಮನ್ವಯವೊಂದೇ ಅಲ್ಲ, ಸ್ವೀಕಾರದ ಪಾಠವನ್ನೂ ವಿಶ್ವಕ್ಕೆ ಸಾರಿದ ಧರ್ಮಕ್ಕೆ ನಾನು ಸೇರಿದವನು ಎಂಬುದು ನನ್ನ ಪಾಲಿನ ಅಭಿಮಾನ.* 👏🏻👏🏻👏🏻👏🏻👏🏻👏🏻👏🏻 *ಸರ್ವಧರ್ಮಗಳನ್ನೂ ಸಮಭಾವದಿಂದ ನೋಡುವುದು ಮಾತ್ರವಲ್ಲ, ಎಲ್ಲ ಧರ್ಮಗಳೂ ನಿಜವೆಂದು ನಾವು ಸ್ವೀಕರಿಸುತ್ತೇವೆ.* 👏🏻👏🏻👏🏻👏🏻👏🏻 *ಭೂಮಿಯ ಮೇಲಿನ ಎಲ್ಲ ಧರ್ಮಗಳ, ಎಲ್ಲ ದೇಶಗಳ ಪೀಡಿತರು ಹಾಗೂ ಅನಾಥರಿಗೆ ಆಶ್ರಯ ನೀಡಿದ ಧರ್ಮ ನನ್ನದು ಎಂಬುದು ನನ್ನ ಹೆಮ್ಮೆ.* 👏🏻👏🏻👏🏻👏🏻👏🏻👏🏻 *ರೋಮನ್‌ ನಿರಂಕುಶಾಧಿಪತ್ಯದಿಂದ ತಮ್ಮ ಪತ್ರ ದೇವಾಲಯಗಳು ಪುಡಿಪುಡಿಯಾದದ್ದನ್ನು ಕಂಡು, ಜೀವ ಉಳಿಸಿಕೊಳ್ಳಲು ದಕ್ಷಿಣ ಭಾರತಕ್ಕೆ ಬಂದ ಇಸ್ರೇಲಿಯನ್ನರೂ ನಮ್ಮ ವಿಶಾಲ ಕೌದಿಯಲ್ಲಿ ಸೇರಿಹೋದ ಪರಿಶುಭ್ರ ಬಟ್ಟೆಯ ತುಣುಕುಗಳಾಗಿದ್ದಾರೆ.* 👏🏻👏🏻👏🏻👏🏻👏🏻👏🏻 *ಹಾಗೆಯೇ ಭವ್ಯ ಜರಾತುಷ್ಟ್ರ ದೇಶದ ಧರ್ಮದವರಿಗೂ ನಮ್ಮಲ್ಲಿ ನೆಲೆಯಿದೆ.* ಮತಭೇದಗಳು, ಅಂಧಶ್ರದ್ಧೆ ಹಾಗೂ ಅದರ ಭಯಾನಕ ಉತ್ಪನ್ನವಾದ ಮೂಲಭೂತವಾದಗಳು ಈ ಸುಂದರ ಪೃಥ್ವಿಯನ್ನು ತುಂಬ ಹಿಂದಿನಿಂದಲೇ ಆಕ್ರಮಿಸಿಕೊಂಡಿವೆ. ಅವು ಧರೆಯನ್ನು ಹಿಂಸಾಚಾರದ ವಿಷದಿಂದ ತುಂಬಿಸಿವೆ, ಮಾನವ ರಕ್ತದಿಂದ ಪದೇ ಪದೆ ತೋಯಿಸಿವೆ, ನಾಗರಿಕತೆಗಳನ್ನು ನಾಶಗೊಳಿಸಿವೆ, ಇಡಿ ಇಡೀ ದೇಶಗಳನ್ನೇ ಸರ್ವನಾಶಕ್ಕೆ ದೂಡಿವೆ. ಇಂಥ ಭಯಾನಕ ಅಸುರರ ಕಿರುಕುಳ ಇಲ್ಲದೆ ಹೋಗಿದ್ದರೆ ಮನುಷ್ಯ ಸಮಾಜ ಈಗಿರುವ ಸ್ಥಿತಿಗಿಂತ ಗಾವುದ ಮುಂದಿರಬೇಕಿತ್ತು. ಬೀಜವನ್ನು ನೆಲದಲ್ಲಿ ಬಿತ್ತಲಾಗುತ್ತದೆ. ಮಣ್ಣು, ಗಾಳಿ, ನೀರು ಅದರ ಸುತ್ತಲೂ ಇವೆ. ಬೀಜವು ಮಣ್ಣು ಅಥವಾ ಗಾಳಿ ಅಥವಾ ನೀರಾಗಿ ಮಾರ್ಪಡುತ್ತದೆಯೆ? ಇಲ್ಲ. ಅದು ಸಸಿಯಾಗಿ ಚಿಗುರುತ್ತದೆ. ಅದರ ಸ್ವಂತ ಬೆಳವಣಿಗೆಯ ನಿಯಮದಂತೆಯೇ ಅದು ಬೆಳೆಯುತ್ತದೆ. ಗಾಳಿ ಬೆಳಕು ನೀರನ್ನು ಹೀರುತ್ತದೆ, ಅವುಗಳನ್ನು ಸಸ್ಯಶಕ್ತಿಯಾಗಿ ಬದಲಿಸುತ್ತದೆ, ಬೆಳೆಯುತ್ತದೆ. *ಕ್ರೈಸ್ತನು ಹಿಂದೂವಾಗಿ, ಬೌದ್ಧನಾಗಿ ಬದಲಾಗಬೇಕಿಲ್ಲ ಅಥವಾ ಬೌದ್ಧ, ಹಿಂದೂ ವ್ಯಕ್ತಿಯು ಕ್ರೈಸ್ತನಾಗಿ ಮತಾಂತರಗೊಳ್ಳಬೇಕಿಲ್ಲ.* ಪ್ರತಿಯೊಬ್ಬನೂ ಇತರರ ಶಕ್ತಿಯನ್ನು ಗೌರಸಿ, ಸ್ವಂತಿಕೆಯನ್ನು ಉಳಿಸಿಕೊಂಡು ತನ್ನದೇ ಬೆಳವಣಿಗೆಯ ನಿಯಮದಂತೆ ವೃದ್ಧಿಸಬೇಕು. ಎಲ್ಲ ಧರ್ಮಗಳ ಘೋಷಣೆಗಳಲ್ಲಿ ಶೀಘ್ರವೇ ಇವುಗಳನ್ನು ಕಾಣುವ ಕಾಲ ಬರಲಿದೆ: *'ಕಚ್ಚಾಡಬೇಡಿ, ನೆರವಾಗಿ', 'ಜೀರ್ಣಿಸಿಕೊಳ್ಳಿ, ಹಾಳುಗೆಡವಬೇಡಿ', 'ಸಾಮರಸ್ಯ ಮತ್ತು ಶಾಂತಿಯೇ ಹೊರತು ಅಂತಃಕಲಹ ಬೇಡ".*

ಸ್ವಾಮಿ ವಿವೇಕಾನಂದ ಜಯಂತಿ


 

ಬ್ಯಾರಿ ಸೆಂಟರ್...! ಎಂದರೇನು?

  ಬ್ಯಾರಿಸೆಂಟರ್ (Barycenter) ಬ್ಯಾರಿಸೆಂಟರ್ (Barycenter) ಪರಿಕಲ್ಪನೆಯನ್ನು ಈ ಕೆಳಗಿನ ಚಿತ್ರದ ಮೂಲಕ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು. ಈ ಚಿತ್ರವು ಬ್ಯಾರಿಸೆಂ...